ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1983 – ಕರ್ನಾಟಕದ ಏಳನೆಯ ವಿಧಾನಸಭೆಗೆ ಚುನಾವಣೆಗಳು. ಈ ಚುನಾವಣೆಯಲ್ಲಿ ಜನತಾ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ಹಿಂದಿನ 1978ರ ವಿಧಾನಸಭೆಯಲ್ಲಿನ ಸ್ಥಾನಗಳಿಗಿಂತ ಜನತಾ ಪಕ್ಷವು 36 ಹೆಚ್ಚು ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 67 ಕಡಿಮೆ ಸ್ಥಾನಗಳನ್ನು ಪಡೆಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷವು ಅಧಿಕಾರಕ್ಕೆ ಬಂತು. ಏಳನೆಯ ವಿಧಾನಸಭೆಯು 24 ಜೂಲೈ 1983 ರಿಂದ 2 ಜನವರಿ 1985ರ ವರೆಗೆ ಆಸ್ತಿತ್ವದಲ್ಲಿತ್ತು ಮತ್ತು ಜನತಾ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ತೀರಾ ಕಡಿಮೆ ಸ್ಥಾನಗಳನ್ನು ಪಡೆದ ಕಾರಣಕ್ಕೆ ರಾಮಕೃಷ್ಣ ಹೆಗಡೆಯವರು ವಿಧಾನಸಭೆ ವಿಸರ್ಜಿಸಿ ಮತ್ತೆ ಜನಾಧೇಶ ಕೋರಿದರು. ಹೀಗಾಗಿ ಏಳನೆಯ ವಿಧಾನಸಭೆ ಅವಧಿಗೆ ಮುನ್ನವೇ ವಿಸರ್ಜನೆಗೊಂಡಿತು. ಈ ವಿಧಾನಸಭೆಯ ಅವಧಿಯಲ್ಲಿ ಜನತಾ ಪಕ್ಷದ ಡಿ. ಬಿ. ಚಂದ್ರೇಗೌಡ ವಿಧಾನಸಭೆಯ ಸ್ಪೀಕರ್ ಆಗಿದ್ದರು. == ಪಲಿತಾಂಶ == == ಆಧಾರಗಳು == , 1983 2016-12-02 , 1985 2016-12-02 2016-12-01 == ಉಲ್ಲೇಖ ==